ಸುದ್ದಿ: ಪ್ರಿನ್ಸ್ ಮಾರ್ಕ್. ಕರ್ನಾಟಕ.
ದಕ್ಷಿಣ ಕನ್ನಡ : ದಕ್ಷಿಣ ಕನ್ನಡ ಜಿಲ್ಲೆಯ ಮರ್ದಾಳ ಗಿಲ್ಗಲ್ ಅಸೆಂಬ್ಲೀಸ್ ಆಫ್ ಗಾಡ್ ದೈವ ಸಭೆಯ ಸದಸ್ಯೆಯಾಗಿರುವ ಬ್ಯೂಲಾ ಪಿ.ಟಿ ಕರ್ನಾಟಕ ರಾಜ್ಯ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್ 64 ಕೆಜಿ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಗೆದ್ದು ಬೆಳ್ಳಿ ಪದಕ ಪಡೆದುಕೊಂಡರು . ಪಾರಶಾಲೆಯಲ್ಲಿರುವ ಪಿ.ವಿ.ಥಾಮಸ್ ಮತ್ತು ಗ್ರೇಸಿ ಥಾಮಸ್ ದಂಪತಿಯ ಪುತ್ರಿಯಾಗಿರುವ ಬ್ಯೂಲಾ ಪುತ್ತೂರು, ಫಿಲೋಮಿನಾ ಕಾಲೇಜಿನಲ್ಲಿ ದ್ವಿತೀಯ ವರ್ಷದ ಎಂ.ಕಾಂ ವಿದ್ಯಾರ್ಥಿನಿಯಾಗಿದ್ದಾರೆ . ಕಳೆದ ವರ್ಷ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಕರ್ನಾಟಕ ರಾಜ್ಯದಲ್ಲಿ ಪ್ರಥಮ ಸ್ಥಾನ ಹಾಗೂ ಚಿನ್ನದ ಪದಕ ಗಳಿಸಿದ್ದರು. ರಾಷ್ಟ್ರಮಟ್ಟದಲ್ಲಿ 8ನೇ ಸ್ಥಾನವನ್ನು ಕೂಡ ಗಳಿಸಿದ್ದರು. ಬ್ಯೂಲಾ ಅವರು ಮುಂಬರುವ ರಾಜ್ಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸ್ಪರ್ಧೆಗಳಿಗೆ ತಯಾರಿ ನಡೆಸುತ್ತಿದ್ದಾರೆ.





