Home Daily news *ಮುತ್ತೇ, ದೇವರು ಎಲ್ಲವನ್ನು ನೋಡಿಕೊಳ್ಳುತ್ತಾನೆ ಎಂಬ ಸಂಗೀತ ಆಲ್ಬಮ್ ರೆವರೆಂಡ್ ಪಾಲ್ ತಂಗಯ್ಯ ಅವರು...

*ಮುತ್ತೇ, ದೇವರು ಎಲ್ಲವನ್ನು ನೋಡಿಕೊಳ್ಳುತ್ತಾನೆ ಎಂಬ ಸಂಗೀತ ಆಲ್ಬಮ್ ರೆವರೆಂಡ್ ಪಾಲ್ ತಂಗಯ್ಯ ಅವರು ವಯನಾಡಿಗಾಗಿ ಅರ್ಪಿಸುತ್ತಿದ್ದಾರೆ.*

0

ಸುದ್ದಿ : ಪ್ರಿನ್ಸ್ ಮಾರ್ಕ್ ಕರ್ನಾಟಕ

ಬೆಂಗಳೂರು: ಮನುಷ್ಯ ಆತ್ಮಸಾಕ್ಷಿಯನ್ನು ನಡುಗಿಸುವ ರೀತಿಯಲ್ಲಿ ನೂರಾರು ಜನರ ಮರಣಕ್ಕೆ ಕಾರಣವಾದ ವಯನಾಡ್ ದುರಂತ ಭೂಮಿಗೆ ಅಖಿಲ ಭಾರತ ಅಸೆಂಬ್ಲೀಸ್ ಆಫ್ ಗಾಡ್ ಅಧ್ಯಕ್ಷ ರೆವರೆಂಡ್ ಪಾಲ್ ತಂಗಯ್ಯ ಅವರು ಭೇಟಿ ನೀಡಿದಾಗ ತಮ್ಮ ಪ್ರೀತಿಪಾತ್ರರು, ಆತ್ಮೀಯರು, ಮನೆ, ವಸ್ತುಗಳನ್ನು ಕಳೆದುಕೊಂಡವರ ದುಃಖ್ಖವು ತನ್ನ ಮನಕಲಕುವಂತೆ ಮಾಡಿತು. ಅಲ್ಲಿ ಎಲ್ಲವನ್ನು ಕಳೆದುಕೊಂಡವರಿಗೆ ಸಾಂತ್ವನ ನೀಡಲು ಪವಿತ್ರಾತ್ಮನು ತನಗೆ ನೀಡಿದ ಆಲೋಚನೆಯನ್ನು ಹಾಡಿನ ಸಾಲುಗಳಾಗಿ ಬರೆದರು. ಎಲ್ಲವನ್ನು ಕಳೆದುಕೊಂಡು ನೋವಿನಲ್ಲಿರುವವರು ತಮ್ಮ ನೋವಿನಲ್ಲಿ ಒಬ್ಬಂಟಿಗರಲ್ಲ ಎಂಬ ಸಂದೇಶವನ್ನೂ ಈ ಹಾಡು ಸಾರುತ್ತದೆ. ಅವರೇ ರಚಿಸಿ ಹಾಡಿದ ಈ ಹಾಡು ಹಲವರಿಗೆ ಸಾಂತ್ವನ ನೀಡುವುದರಲ್ಲಿ ಸಂಶಯವಿಲ್ಲ. ದೇವರ ಚಿತ್ತವಾದರೆ ಈ ಸಂಗೀತ ಆಲ್ಬಂ 24 / 8 / 2024 ರಂದು ಬಿಡುಗಡೆಯಾಗಲಿದೆ.

LEAVE A REPLY

Please enter your comment!
Please enter your name here